Monday, September 23, 2013

ದಾಮೋದರ ಅಷ್ಠಕ

ದಾಮೋದರ ಅಷ್ಠಕ 

 (ಪದ್ಮ ಪುರಾಣದಲ್ಲಿ ಸತ್ಯವ್ರತ ಮುನಿಗಳ ಹಾಗು ನಾರದ ಮತ್ತು ಶೌನಕ ಮುನಿಗಳ ಸಂವಾದದ ಪದಗಳು )
  
 



ನಮಾಮಿಶ್ವರಾಂ ಸತ್-ಚಿತ್-ಆನಂದ ರೂಪಂ 
ಲಸತ್ ಕುಂಡಲಾಂ ಗೋಕುಲೆ ಬ್ರಜಮಾನಂ 
ಯಶೋಧಾ-ಭಿಯೊಲುಖ್ಹಾ ಲಾಧ-ಧವಮಾನಂ 
ಪರಾಂಮೃಷ್ಠಂ  ಅತ್ಯಂತತೊ ಧೃತ್ಯ ಗೋಪ್ಯ ।।೧।।
 



ನಾನು ನಮಿಸುವೆನು ಪರಮ ಈಶ್ವರನಾದ "ಶ್ರೀ ಕೃಷ್ಣ"ನಿಗೆ, ಯಾರು ಸಚ್ಚಿದಾನಂದ ರೂಪನಾಗಿರುವನೋ. ಅವನ ಮತ್ಸ್ಯಾಕಾರದ (ಮಕರ) ಕುಂಡಲಗಳು ತೂಗಾಡುತ್ತಾ, ಕೆನ್ನಯ ಮೇಲೆ ಆಟವಾಡುತ್ತಿದೆ. ಒಂದು ದಿನ ಅತ್ಯಂತ ರಮಣೀಯವಾದ ಗೋಕುಲ ಧಾಮದಲ್ಲಿ,ಹೊರಳು-ಕಲ್ಲಿನ ಮೇಲೆ ಹತ್ತಿ ಮೊಸರಿನ ಗಡಿಗೆಯನ್ನು ಓಡೆದು,ಮಜ್ಜಿಗೆ ಕಡಿಯುತ್ತಿದ್ದ ಕುಂಡವನ್ನು ಕುಡುಗೋಲಿನಿಂದ ಓಡೆದು, ತಾಯಿಯಾದ ಯಶೋಧೆಯ ಪೆಟ್ಟಿನಿಂದ ಹೆದರಿ, ಮಜ್ಜಿಗೆಯ ಕುಡುಗೋಲಿನ ಮೇಲಿಂದ ಎಗರಿ ಓಡಿಹೋಗುತ್ತಿದ್ದನು. ಆದರೋ ಯಶೋಧೆ ಕೃಷ್ಣನಿಗಿಂತ ಅತ್ಯಂತ ವೇಗದಲ್ಲಿ ಓಡಿ ಕೃಷ್ಣನನ್ನು ಹಿಂದಿನಿಂದ ಹಿಡಿದಳು. 
                                                          
ರುದಂತಾo ಮುಹ್ಹುರ್ ನೇತ್ರ - ಯುಗ್ಮಂ ಮೃಜಂತಾಂ
ಕರಾಂ ಭೋಜ -ಯುಗ್ಮೇನ ಸಾತಂಕ-ನೇತ್ರಾಂ
ಮುಹು-ಸ್ವಾಸ-ಕಂಪಾ-ತ್ರಿರೇಖಾಂಕ ಕಂಠ 
ಸ್ಥಿತೈ-ಗ್ರೈವ ದಾಮೋದರಂ ಭಕ್ತಿ-ಭದ್ದಂ ।।೨।।
 
ನಾನು ನಮಿಸುವೆನು ದಾಮೋದರನಿಗೆ, ಯಾರು ತನ್ನ ತಾಯಿಯ ಕೈಲಿದ್ದ ಕೋಲಿಗೆ ಹೆದರಿ ಅಳುತ್ತಾ, ಮತ್ತೆ-ಮತ್ತೆ ಎರಡೂ ಕರಕಮಲಗಳಿಂದ ಕಣ್ಣುಗಳನ್ನು ಉಜ್ಜುತ್ತಾ, ಕಣ್ಣುಗಳಲ್ಲಿ ಆತಂಕವನ್ನು ಭಿಂಬಿಸುತ್ತಾ, ಬಿಕ್ಕಿ-ಬಿಕ್ಕಿ ಅಳುವ ಕಂಪನದಿಂದ ಕಂಠದಲ್ಲಿ  ಮೂರು ಗೆರೆಗಳಾಗಿ ಧರಿಸಿರುವ ಆಭರಣಗಳೂ ಅಲುಗಾಡುತ್ತಿದ್ದವು. ಹಾಗು ಯಾರ ಉದರವು (ಹೊಟ್ಟೆಯು) ತಾಯಿಯಾದ ಯಶೋಧೆಯ ಪುತ್ರ-ವಾತ್ಸಲ್ಯ ಭಕ್ತಿಯಿಂದ ಭಂದಿತವಾಗಿದೆಯೋ. 

 
ಇತಿದ್ರಿಕ್ ಸ್ವ-ಲೀಲಾಭಿರ್ ಆನಂದ-ಕುಂಡೆ
ಸ್ವ-ಘೋಷಂ ನಿಮಜ್ಜಂತಂ ಅಖ್ಯಪಯಂತಂ
ತಡಿಯೇಸಿತ-ಘ್ನೇಶು ಭಕ್ತ್ಯರ್ ಜಿತತ್ವಂ 
ಪುನಃ ಪ್ರೇಮತಸ್ತ್ವಂ ಸತಾವೃತ್ತಿ ವಂದೇ ।।೩।।
 
ಯಾರು ತನ್ನ ಈರೀತಿಯಾದ ಬಾಲ್ಯ-ಲೀಲೆಗಳಿಂದ ಗೋಕುಲವಾಸಿಗಳನ್ನು ಆನಂದ-ಕುಂಡದಲ್ಲಿ ಅದ್ದಿರುವನೋ ಹಾಗು ಈ ತನ್ನ ಭಕ್ತರಮೂಲಕ ಭಕ್ತ್ಯಾಭಿಲಾಶಿಗಳಿಗೆ ತನ್ನನ್ನು ಜಯಿಸಲು ಐಶ್ವರ್ಯ, ಜ್ಞಾನಿಗಳಿoದಲ್ಲ ಕೇವಲ ಪ್ರೇಮದಿಂದಲೇ-ಯೆಂದು ಘೋಷಿಸುತ್ತಿರುವನೋ, ಆ ಪ್ರೀತಿಯ ಸ್ವರೂಪನಾದ ದಾಮೋದರನಿಗೆ ಪುನಃ-ಪುನಃ ವಂದಿಸುವೆನು.
 

 
ವರಂ ದೇವ! ಮೋಕ್ಷಂ ನ ಮೋಕ್ಷಂ ವಧಿಂ ವಾ 
ನಾ ಚಂನ್ಯಮ್  ವೃಣ್ಣೆ-ಹಂ ವರೇಶಾದ ಅಪೀಹ
ಇದಂ ತೆ ವಪುರ್-ನಾಥ! ಗೋಪಾಲ-ಬಾಲಂ 
ಸದಾ ಮೇ ಮನಸ್ಯೈ ಆವಿರಾಸ್ಥಂ ಕಿಮ್ ಅನ್ಯೈಃ ।।೪।।
 
ಹೇ ದೇವ! ನೀನು ವರಕೊಡುವುದರಲ್ಲಿ ಸಮರ್ಥನಾಗಿರುವೆ, ಆದರೆ ನಾನು ಮೊಕ್ಷವನ್ನಿಚ್ಚಿಸುತಿಲ್ಲ, ವೈಕುಂಠ-ಸ್ಥಿರವಾಸವನ್ನಲ್ಲ ಅಥವಾ ಬೇರಾವುದೇ ವರವನ್ನಲ.  ಹೇ ನಾಥ! ನಿನ್ನ ಗೋಪಾಲ-ಬಾಲ ರೂಪವು ಹೇಗೆ ಬೃಂಧಾವನದಲ್ಲಿಯಿರುವುದೂ ಅಂತಹ ರೂಪವು ನನ್ನ ಹೃದಯದಲ್ಲಿ  ನೆಲಸಲಿ, ಹೀಗಿರುವಾಗ ಬೇರಾವ ವರಗಳಿಂದ ನನಗೇನು ಪ್ರಯೋಜನ?
 
ಇದಂ ತೆ ಮುಖಾಂಭೋಜಂ ಅವ್ಯಕ್ತ-ನೀರ್ಲೈ
ವೃತಂ ಕುಂತಲೈ ಸ್ನಿಗ್ದ - ರಕ್ತೈ ಚ ಗೋಪ್ಯ 
ಮುಹ್ಸು ಚುಂಬಿತo ಭಿಂಬ -ರಕ್ತ ಧರಂ ಮೇ 
ಮನಸ್ಯಾ-ಆವಿರಸ್ತಂ-ಅಲಂ -ಲಕ್ಷ-ಲಾಬೈಃ ।।೫।।
 
ಹೇ ದೇವ ! ನಿನ್ನ ಮುಖ-ಕಮಲದಲ್ಲಿ, ಅವ್ಯಕ್ತ ಕಾಂತಿಯಿಂದ ಶೃಂಗಾರಗೊಂಡ ಗುಂಗುರು ಮುಂಗುರುಳುಗಳು, ತಾಯಿಯ ರಕ್ತ ವರ್ಣದ ಬಿಂಬ ಫಲಗಲಕಾಂತಿಯಂತೆ ಕಂಗೊಲಿಸುತ್ತಿದ್ದ ತುಟಿಗಳ ಚುಂಬನದಿಂದ,ಇಂತಹ ಸುಂದರವಾದ ದೃಶ್ಯವು ಸದಾ 
ನನ್ನ ಮನಸಲ್ಲಿ ನೆಲಸಿರಲಿ, ಬೇರೆ ಲಕ್ಷಾಂತರ ಲಾಭಗಳು ನನಗೆ ಅಗತ್ಯವಿಲ್ಲ. 
 
ನಮೋ ದೇವ ! ದಾಮೊದರಾನಂತ ವಿಷ್ಣೋ !
ಪ್ರಸೀದ ಪ್ರಭೋ! ದುಖಃ-ಜಲಾಬ್ಧಿ-ಮಘ್ನಂ 
ಕೃಪಾ-ದೃಷ್ಠಿ ವೃಷ್ಟ್ಯತಿ - ಧೀನಂ ಬತಾನು 
ಗೃಃಹ್ನೆಶು! ಮಾಮ್ ಅಜ್ಞ್ಯಾಂ ಏಧಿ ಅಕ್ಷಿ-ದೃಶ್ಯಃ ।।೬।।
  
ನಮಿಸುವೆನು ಓ ದೇವ ! ಓ ಭಕ್ತ-ವತ್ಸಲ ದಾಮೋದರ ! ಓ ಅನಂತ, ಯಾರು ಅನನ್ಯ ಅಪರಿಮಿತ ಶಕ್ತಿಗಳನ್ನು ಹೊಂದಿರುವನೋ ! ಓ ಸರ್ವವ್ಯಾಪಿ ವಿಷ್ಣೋ ! ಓ ಸರ್ವ ಸ್ವತಂತ್ರ ಈಶನಾದ ಪ್ರಭುವೇ ! ನನ್ನಿಂದ ಪ್ರಸನ್ನನಾಗು ! ನಾನು ದುಃಖ ಸರೋವರದಲ್ಲಿ ಮುಳಿಗಿದ್ದೇನೆ - ನಿನ್ನ ಕೃಪಾವೃಷ್ಟಿಯಿಂದ ಧೀನನಾಗಿ ಶರಣನಾಗಿರುವ ಈ ಆತ್ಮನನ್ನು ಉದ್ದರಿಸು ಹಾಗು ನನ್ನ ಕಣ್ಣುಗಳಿಗೆ ನಿನ್ನ ದರ್ಶನ ಭಾಗ್ಯವನ್ನು ಕೊಡು.
     




ಕುವೆರಾತ್ಮಜೌ ಭದ್ದ -ಮೂರ್ತ್ಯೈವ ಯದ್ತತ 
ತ್ವಯ ಮೋಚಿತೌ  ಭಕ್ತಿ-ಭಜೌ ಕೃತೌಚ 
ತಥಾ ಪ್ರೇಮ ಭಕ್ತಿಂ ಸ್ವಕಾಂ ಮೇ ಪ್ರಯಚ್ಚ
ನ ಮೋಕ್ಷೆ ಗ್ರಹೋ - ಮೆಸ್ಥಿ ದಾಮೊದರೇಹ ।।೭।।
 
 
 
 
 
 
 
 
ಹೇ ದಾಮೋದರ ! ನಿನ್ನನ್ನು ಹೊರಳು-ಕಲ್ಲಿಗೆ ಕಟ್ಟಿಹಾಕಿದ್ದರೂ, ನೀನು ನಾರದರಿಂದ ಶಪಿತರಾಗಿ ಮರಗಳಂತೆ ನಿಂತಿದ್ದ ಕುಬೇರನ ಮಕ್ಕಳನ್ನು (ನಳಕೊಬರಿ , ವಣಗ್ರಿವ) ಶಾಪವಿಮೋಚನೆ ಮಾಡಿ, ನಿನ್ನ ಗೋಕುಲ ಧಾಮದಲ್ಲಿ  ಸ್ಥಿರವಾಸಿ ಗಲಾಗುವಂತೆ ವರಕೊಟ್ಟಿರುವೆ, ಅದೆ ರೀತಿಯಾಗಿ ದಯವಿಟ್ಟು ಈ ಧೀನ ಆತ್ಮನಿಗೆ ನಿನ್ನ ಪ್ರೇಮ-ಭಕ್ತಿಯನ್ನು ದಯಪಾಲಿಸು. ಇದೆ ನನ್ನ ಜೀವನದ ಪರಮ ಮತ್ತು ಏಕೈಕ ಉದ್ದೇಶ, ಬೇರಾವುದೇ ಮೋಕ್ಷಾಕಾಂಕ್ಷೆಯೂ, ಗ್ರಹ ಅಧಿಪತ್ಯವೋ(ದ್ರುವನಂತೆ) ನನಗೆ ಅಭಿಲಾಷೆಯಿಲ್ಲ. 

 
ನಮಸ್ತೆಸ್ತು ದಾಮ್ನೆ ಸ್ಫುರ ದೀಪ್ತಿ ಧಾಮ್ನೆ
ತ್ವದಿಯೋದರಾಯಾತ ವಿಶ್ವಸ್ಯ ಧಾಮ್ನೆ
ನಮೋ ರಾಧಿಕಾಯೈ ತ್ವದೀಯ ಪ್ರಿಯಾಯೈ 
ನಮೋನಂತ-ಲೀಲಾಯ ದೇವಾಯ ತುಭ್ಯಂ ।।೮।।
 
 ಓ ದಾಮೋದರ ! ನಿನ್ನ ಉದರವನ್ನು ಬಿಗಿದಪ್ಪಿರುವ ಆ ಭಕ್ತಿ-ಭಂದನದ ದಾರಕ್ಕೆ(ಹಗ್ಗಕ್ಕೆ) ಪ್ರಣಾಮಗಳು ! ಹಾಗು ನಿನ್ನ ಉದರಕ್ಕೂ ಪ್ರಣಾಮಗಳು, ಯಾವುದು ಆ ಬ್ರಹ್ಮಕಾಂತಿಗೆ ಶ್ರೋತವೂ ಹಾಗೂ ಪೂರ್ಣ ಬ್ರಹ್ಮಾಂಡದ ಆಧಾರವೋ, ಮತ್ತೆ ಮತ್ತೆ ನಮಿಸುವೆನು ಶ್ರೀಮತಿ ರಾಧಿಕೆಗೆ, ಯಾರು ನಿನಗೆ ಅತ್ಯಂತ ಪ್ರೀತಿಪಾತ್ರಳೊ (ಬಾಹುಗಳಿಂದ ಉದರವನ್ನು ಭಂದಿಸುವವಳೂ), ಹಾಗು ನಿನ್ನ ಅನಂತ, ಅಧ್ಭುತ ಲೀಲೆಗಳಿಗೂ ನನ್ನ ಪ್ರಣಾಮಗಳು.
 

Friday, August 9, 2013

"ರಾಧೆ ಜಯ ಜಯ ಮಾಧವ ದಯಿತೆ" - ಭಜನಾ ತಾತ್ಪರ್ಯ

"ರಾಧೆ ಜಯ ಜಯ ಮಾಧವ ದಯಿತೆ" - ಭಜನಾ ತಾತ್ಪರ್ಯ

೧. ರಾಧೆ ಜಯ ಜಯ ಮಾಧವ ದಯಿತೆ
     ಗೋಕುಲ-ತಾರುಣಿ ಮಂಡಲ ಮಹಿತೆ

ಓ ಶ್ರೀಮತಿ ರಾಧಿಕೆ! ಓ ಮಾಧವನ ಪ್ರೀತಿಯ ಅರಸಿಯೆ! ಓ ಗೋಕುಲ ಮಂಡಲದ ಸುಕೋಮಲ ಯುವತಿಯರ ಆರಧಯವೇ! ನಿನಗೆ ಜಯವಾಗಲಿ! ನಿನಗೆ ಜಯವಾಗಲಿ!

೨. ಧಾಮೋದರ-ರತಿ ವರ್ಧನ-ವೇಷೆ
     ಹರಿ- ನಿಷ್ಕೊಟ ವೃಂದಾವಪಿನೇಷೆ

ಕಾಲಿನ ನಖದಿಂದ ಹಿಡಿದು ಶಿಕಾಂತದವರೆಗೂ ಹೊಳೆಯುತಿರುವೆ, ನಿನ್ನ ಸೌಂದರ್ಯಭರಿತ ಅಲಂಕಾರವು ಹಾಗು ನಿನ್ನ ಸಂಪೂರ್ಣ ಇರುವಿಕೆಯು, ಧಾಮೋದರನ ಪ್ರೀತಿಯನ್ನು ಆಕರ್ಷಿಸಲಿ! ಓ ವೃಂದಾವನದ ರಾಣಿಯೇ! ಓ ಹರಿಯ ಆಸೆಯ ತೋಟವೆ!

೩. ವೃಷಭಾನು-ದಾದಿ ನವ ಶಶಿಲೇಖೆ
     ಲಲಿತಾ-ಸಖಿಗುಣ ರಮಿತ ವಿಶಾಖೆ

ಸಮುದ್ರ ಮಂಥನದಿಂದ ಉದ್ಭವಸಿದ ಚಂದ್ರನಂತೆ, ನೀನು ವೃಷಭಾನು ಮಹಾರಾಜನ ಪ್ರೀತಿಯ ಸಮುದ್ರದಲ್ಲಿ ಉದ್ಭವಸಿದ ಪೂರ್ಣಚಂದ್ರನಂತಿರುವೆ! ಓ ಲಲಿತೆಯ-ಸಖಿಯೆ! ನೀನು ನಿನ್ನ ಪ್ರೀತಿಯ ವಿಶಾಖ, ಇತ್ಯಾದಿ ಸಖಿಯರ ಹೃದಯವನ್ನು ನಿನ್ನ ಆಕರ್ಷಕ ಗುಣಗಳಾದ ಪ್ರೀತಿ, ಕರುಣೆ ಮತ್ತು ಕೃಷ್ಣ-ಪ್ರೀತಿಯಿಂದ ಗೆದ್ದಿರುವೆ!

೪. ಕರುಣಾಂ ಕುರು ಮಾಯಿ ಕರುಣಾ-ಭರಿತೆ
    ಸನಕ-ಸನಾತನ ವರ್ಣಿತ-ಚರಿತೆ

ನೀನು ನಿನ್ನ ಭಕ್ತರಿಗೆ ನಿರಂತರ ಶುಭಕೋರುವವಳು ಮತ್ತು ಅವರ ಹೃದಯಗಳನ್ನು ತುಂಬಿ ನಲಿದಾಡುವವಳು.(ಅಥವಾ ನೀನು ನನ್ನ ಗುರುಜನರಾದ ಸನಾತನ ಗೋಸ್ವಾಮಿಗಳ ಹೃದಯ ಮಂದಿರದಲ್ಲಿ ಸದಾ ನಲಿದಾಡುವವಳು).







Saturday, July 27, 2013

"ಕೃಷ್ಣ ದೇವ ಭವಂತಂ ವಂದೇ "- ಭಜನಾ ತಾತ್ಪರ್ಯ

"ಕೃಷ್ಣ ದೇವ ಭವಂತಂ ವಂದೇ" - ಭಜನಾ ತಾತ್ಪರ್ಯ


೧ ಕೃಷ್ಣ ದೇವ ಭವಂತಂ ವಂದೇ
ಮನ ಮಾನಸ ಮಧುಕರಮರ್ಪಯ ನಿಜ-ಪದ ಪಂಕಜಾ ಮಕರಂದೆ

ಓ ಭಗವಾನ್ ಶ್ರೀ ಕೃಷ್ಣನೆ ! ನಾನು ನಿನಗೆ ವಂದಿಸುತಿದ್ದೇನೆ. ದಯೆಮಾಡಿ ನನ್ನ ಈ ಧುಂಬಿಎಂಬ ಮನಕ್ಕೆ, ನಿನ್ನ ಪಾದಕಮಲಗಳ ಜೇನನ್ನುಸವಿಯುವ ಸೇವೆಯನ್ನೀಯು. ಬೇರೆ ಪದಗಳ್ಲಲಿ ಹೇಳುವುದಾದರೆ, ದಯೆಮಾಡಿ ನನ್ನ ನಾಲಿಗೆಯ ರುಚಿಯನ್ನು ನಿನ್ನ ಪದಕಮಲಗಳ ಜೇನಿನ ರಸದ ಆಸ್ವಾದನೆಯನ್ನು ಕೊಟ್ಟು, ಬೇರಿನ್ನೇನು ರುಚಿಸದಂತೆ ಮಾಡು.

೨. ಯಧ್ಯಪಿ ಸಮಾಧಿಶು ವಿಧಿರಪಿ ಪಶ್ಯತಿ, ನಾ ತವ ನಖ್ಹಾಗ್ರ-ಮರೀಚಿಮ್
ಇದಂ ಇಚ್ಚಾಮಿ ನಿಷಮ್ಯತವಾಚ್ಯುತ ! ತದಪಿ ಕೃಪಾದ್ಭುತ-ವಿಚಿಂ

ಆದರೂ ಬ್ರಹ್ಮದೇವರು ಪೂರ್ಣ ಸಮಾಧಿಯಲ್ಲಿದ್ದರೂ, ವಿಧಿಯ ಪೂರ್ಣ ಜ್ಞಾನವಿದ್ದರೂ, ನಿನ್ನ ಕಾಲುಗುರುಗಳ ಒಂದು ಬಿಂಭವನ್ನಾದರೂ ನೋಡಲಾರರು. ಆದರೂ ಹೇ ಅಚ್ಯುತ, ನಿನ್ನ ಕೃಪೆಯ ಅಧ್ಭುತ ಮಹಿಮೆಯನ್ನು ತಿಳಿದು, ನಿನ್ನ ದರ್ಶನದ ಇಚ್ಚೆಯನ್ನ ಹೊಂದಿದ್ದೇನೆ, ದಯಪಾಲಿಸು.

೩. ಭಕ್ತಿರ್ ಉದಾಂಚ್ಯತಿ ಯದ್ಯಪಿ ಮಾಧವ, ನಾ ತವ್ಯೈ ಮಮ ತಿಲ-ಮಾತ್ರಿ
ಪರಮೇಶ್ವರ-ರತಾ ತದಪಿ ತವಾಧಿಕ, ದುರ್ಘಟ-ಘಟನ ವಿಧಾತ್ರಿ

ಹೇ ಮಾಧವ! ನನಗೆ ನಿನ್ನಲ್ಲಿ ಎಳ್ಳುಮಾತ್ರದಷ್ಟೂ ಭಕ್ತಿಯಿರದಿದ್ದರೂ, ನೀನು ನಿನ್ನ ಅಚಿಂತ್ಯ ಶಕ್ತಿಯಿಂದ, ಆಗದಿರುವ ಕಷ್ಠಸಾಧ್ಯ ಕಾರ್ಯಗಳನ್ನೂ ಸಾಧ್ಯಮಾಡುವೆ, ದಯೆಮಾಡಿ ನನ್ನ ಹೃದಯಾಳದ ಭಕ್ತ್ಯಾಕಾಂಕ್ಷೆಗಳನ್ನು ಪೂರ್ಣಮಾಡು.

೪. ಅಯಂ ಅವಿಲೋಲ ತಯಾದ್ಯ ಸನಾತನ, ಕಲಿತಾದ್ಭುತ-ರಸ ಭಾರಂ
ನಿವಸತು ನಿತ್ಯಂ ಇಹಾಮ್ರಿತ-ನಿಂದಿನಿ, ವಿಂದನ ಮಧುರಿಮ-ಸಾರಂ

ಹೇ ಸನಾತನ, ನಿನ್ನ ಪದಕಮಲಗಳಲ್ಲಿ ಅಸಂಖ್ಯಾತ ಅದ್ಭುತ ರಸಗಳು ತುಂಬಿವೆ , ನನ್ನ ಮನದ ದುಂಭಿಯು ನಿರಂತರವಾಗಿ ಆ ನಿನ್ನ  ಜೇನಿನ ಅಮೃತದ ಸವಿಯಲಿ, ಬೇರೆಲ್ಲವನ್ನೂ ನಾಚಿಸುವಂತೆ ಮಾಡು, ಏಕೆಂದರೆ ಅದರಲ್ಲಿ ಸರ್ವರಸಗಳೂ ಅಡಗಿದೆ, ಇದುವೆ ನನ್ನ ಪ್ರಾರ್ಥನೆ
--------------------------------------------------------------------------------------------------------------------------

Thursday, March 14, 2013

ವೈಷ್ಣವರ " ಉಧ್ಭವ ಹಾಗು ತಿರೋಭಾವ " ತಿಥಿಗಳ ಸಂತೆ

ವೈಷ್ಣವರ " ಉಧ್ಭವ ಹಾಗು ತಿರೋಭಾವ " ತಿಥಿಗಳ ಸಂತೆ - ಫೆಬ್ರವರಿ & ಮಾರ್ಚಿ ೨೦೧೩

  1. ೦೮ - ಫೆಬ್ರವರಿ-೨೦೧೩ - ಶ್ರೀಲ ಭಕ್ತಿ ವೇದಾಂತ ನಾರಾಯಣ ಗೋಸ್ವಾಮಿಯರ ಉಧ್ಭವ ತಿಥಿ
  2. ೧೪ - ಫೆಬ್ರವರಿ-೨೦೧೩ - ಶ್ರೀಲ ನಿತ್ಯಾನಂದರ ಉಧ್ಭವ ತಿಥಿ
  3. ೧೭ - ಫೆಬ್ರವರಿ-೨೦೧೩ - ಶ್ರಿ ಅದ್ವೈತಾಚಾರ್ಯರ ಉಧ್ಭವ ತಿಥಿ
  4. ೧೯ - ಫೆಬ್ರವರಿ-೨೦೧೩ -ಶ್ರೀಲ ಮಧ್ವಾಚಾರ್ಯರ ಉಧ್ಭವ ತಿಥಿ
  5. ೨೭ - ಫೆಬ್ರವರಿ-೨೦೧೩ - ಶ್ರೀಲ ಭಕ್ತಿ ಪ್ರಜ್ಞ್ಯಾನ ಕೇಶವ ಗೋಸ್ವಾಮಿಯರ ಉಧ್ಭವ ತಿಥಿ

  1. ೦೨ -ಮಾರ್ಚಿ-೨೦೧೩ - ಶ್ರೀಲ ಭಕ್ತಿ ಸಿದ್ಧಾಂತ ಸರಸ್ವತಿ ಪ್ರಭುಪಾದರ ಉಧ್ಭವ ತಿಥಿ
  2. ೦೯ -ಮಾರ್ಚಿ-೨೦೧೩ - ಶ್ರೀಲ ಈಶ್ವರ ಪುರಿ ಮಹಾರಾಜರ ತಿರೋಭಾವ ತಿಥಿ
  3. ೧೨ -ಮಾರ್ಚಿ-೨೦೧೩ -ಶ್ರೀಲ ಜಗನ್ನಾಥ ದಾಸ ಭಾಬಾಜಿ ಮಹಾರಾಜರ ತಿರೋಭಾವ ತಿಥಿ; ಶ್ರೀಲ ಭಕ್ತಿ ದೈತ ಮಾಧವ ಗೋಸ್ವಾಮಿ ಮಹಾರಾಜರ ತಿರೋಭಾವ ತಿಥಿ; ಶ್ರೀ ರಸಿಕಾನಂದರ ತಿರೋಭಾವ ತಿಥಿ
  4. ೨೪ -ಮಾರ್ಚಿ-೨೦೧೩ - ಶ್ರೀಲ ಮಾಧವೇಂದ್ರ  ಪುರಿ ಮಹಾರಾಜರ ತಿರೋಭಾವ ತಿಥಿ
  5. ೨೭ -ಮಾರ್ಚಿ-೨೦೧೩ - ಶ್ರೀ ಚೈತನ್ಯ ಮಹಾಪ್ರಭುಗಳ ಉಧ್ಭವ ತಿಥಿ
-------------------------------- ಶುಭಂ --------------------------------------

Tuesday, August 25, 2009

ಮಹಾಪ್ರಭುಗಳ ಶಿಕ್ಷಾಷ್ಷ್ಠಕ

ಮಹಾಪ್ರಭುಗಳ ಶಿಕ್ಷಾಷ್ಷ್ಠಕ
(1)ಚೇತೋ ದರ್ಪಣ ಮಾರ್ಜನಂ ಭವ ಮಹಾ ಧಾವಾಗ್ನಿ ನಿರ್ವಾಪನಂ
ಶ್ರೇಯಃ ಕೈರವ ಚಂದ್ರಿಕಾ ವಿತರಣಂ ವಿದ್ಯಾ ವಧು ಜೀವನಂ
ಆನಂದಾಂಮ್ಬುದಿ ವರ್ಧನಂ ಪ್ರತಿ ಪದಾಮ್ ಪುಣಾಮೃಥ ಸ್ವಾದನಂ
ಸರ್ವಾತ್ಮ ಸ್ನಪನಂ ಪರಮ ವಿಜಯತೆ ಶ್ರೀ ಕೃಷ್ಣ ಸಂಕಿರ್ತನಂ
(೨) ನಾಮ್ನಾಂ ಅಕಾರಿ ಬಹುಧಾ ನಿಜ ಸರ್ವ ಶಕ್ತೈಸ್
ತತ್ರಾರ್ಪಿತ ನಿಯಮಿತಃ ಸ್ಮರಣೆನ ಕಾಲಃ
ಏತದ್ರಿಸಿ ತವಕೃಪ ಭಗವಾನ್ ಮಮಾಪಿ
ದುರ್ದೈವಂ ಇದ್ರಿಶಂ ಇಹಜನಿ ನಾನುರಾಗಹ

Friday, February 20, 2009

ಚೈತನ್ಯ ಮಹಾಪ್ರಭು (೧೪೮೬ - ೧೫೩೪)

ಚೈತನ್ಯ ಮಹಾಪ್ರಭು (1486 -1534)
Lord Caitanya on the jewell roadಮಹಾಪ್ರಭುಗಳ ಅವತರಣೆ

ಚೈತನ್ಯ ಮಹಾಪ್ರಭುಗಳು ಬಂಗಾಳದ ನದೀಯ ನಗರದ ನವದ್ವೀಪವೆಂಬ ಪಟ್ಟಣದಲ್ಲಿ ಫೆಬ್ರುವರಿ ೧೮, ೧೪೮೬ ಅವತರಿಸಿದರು, ಅಂದು ಚಂದ್ರ ಗ್ರಹಣವಾಗಿತು ಆಗ ನದಿಯ ಗ್ರಾಮಸ್ತರು ಗಂಗಾ ನದಿಯಲಿ ಮಿಂದು "ಹರಿಬೋಲ್ ಹರಿಬೋಲ್" ಎಂದು ಭಜಿಸಿದರು. ಅವರ ಪೊಷಕರು ಅವರಿಗಿತ್ತ ಹೆಸರು "ವಿಶ್ವಾಂಭರ್" - ಅವರು ಎರಡನೆ ಮಗನಾಗಿ ಜಗನಾಥ ಮಿಶ್ರ ಹಾಗು ಅವರ ಪತ್ನಿ ಸಚಿ ದೇವಿ ಯವರಿಗೆ ಜನಿಸಿದರು.
ಅವರನ್ನು ಕೆಲವೊಮ್ಮೆ "ಗೌರ (ಸಂಸ್ಕೃತ ದಲ್ಲಿ ಬಂಗಾರದ ವರ್ಣ)" ಎಂದು ಸಂಬೋಧಿಸುತಿದ್ದರು ಯಾಕೆಂದರೆ ಅವರ ಮೈ ಬಣ್ಣ ಸುವರ್ಣಮಯವಾಗಿತ್ತು. ಹಾಗು ಅವರನು "ನಿಮಾಯಿ" ಎಂದು ಸಂಬೋಧಿಸುತಿದ್ದರು ಯಾಕೆನ್ದರೆ
ಅವರ ಜನ್ಮವು ಒಂದು ಭೇವಿನ (ಹಿಂದಿಯಲ್ಲಿ ನೀಮ್) ಮರದ ಕೆಳಗೆ ಆಗಿತ್ತು.

ಮಹಾಪ್ರಭು ಒಂದು ಆಧ್ಯಾತ್ಮಿಕ ಪರಿಚಯ

ಚೈತನ್ಯ ಮಹಾಪ್ರಭುಗಳು ನಮ್ಮನ್ತೆ ಸಮಾನ್ಯ ಮನುಷ್ಯರಲ್ಲ, ಸ್ವಯಂ ಪುರುಷೊತ್ಥಮ ಶ್ರಿಕೃಷ್ಣ, ಅವರು ಭಕ್ತರಾಗಿ ೫೦೦ ವರ್ಶಗಳ ಹಿಂದೆ ಅವತರಿಸಿ, ಬ್ರಹ್ಮ-ಮಧ್ವ-ಸಂಪ್ರದಾಯದ ರೂವಾರಿಯಾದರು. ಚೈತನ್ಯ ಮಹಾಪ್ರಭುಗಳು ತಮ್ಮ ಇತರೆ ನಾಲ್ಕು ಶಿಶ್ಯರಾಗಿದ್ದ, ತಮ್ಮ ಅಂಶಗಳೊಂದಿಗೆ ಅವರು ಅವತರಿಸಿ, "ಪಂಚ-ತತ್ವ" ಯೆಂದು ಪ್ರಖ್ಯಾತರಾದರು. ಅಷ್ಟೇ ಅಲ್ಲದೇ ಅವರು ಕ್ರಿಷ್ಣನ್ನಥೆಯೇ ವಿಶ್ವಸ್ವರೂಪವನ್ನು ತಮ್ಮ ಸಹಚರರಾದ ಅದ್ವೈತ ಆಚಾರ್ಯ ಹಾಗು ನಿತ್ಯಾನಂದ ಅಚಾರ್ಯರಿಗೆ ಹಲವು ಸಂಧರ್ಭಗಳಲ್ಲಿ ತೋರಿದರು. 

Sunday, February 15, 2009

ಮಹಾಮಂತ್ರ



ಹರೆ ಕೃಷ್ಣ ಹರೆ ಕೃಷ್ಣ
ಕೃಷ್ಣ ಕೃಷ್ಣ ಹರೆ ಹರೆ

ಹರೆ ರಾಮ ಹರೆ ರಾಮ
ರಾಮ ರಾಮ ಹರೆ ಹರೆ

Friday, February 13, 2009

ಶ್ರೀ ಕೃಷ್ಣ ಚೈತನ್ಯ


ಪಂಚ-ತತ್ವ

ಪಂಚ-ತತ್ವ




ಶ್ರೀ ಕೃಷ್ಣ ಚೈತನ್ಯ (ಮಧ್ಯ), ಶ್ರೀ ನಿತ್ಯಾನಂದ ಪ್ರಭು (ನೀಲಿ ಧೋತಿ),
ಶ್ರೀ ಅದ್ವೈತ ಆಚಾರ್ಯ (ಗಡ್ಡ ದ್ಹೊಂಧಿಗೆ), ಶ್ರೀ ಗಧಾಧರ ಪಂಡಿತ (ನೀರಳೆ ಧೋತಿ),
ಶ್ರೀ ಶ್ರೀನಿವಾಸ ಪಂಡಿತ (ಖಾವಿ ಧೋತಿ)

ಮಂಗಳಾಚರಣೆ

ಗುರು ಮಂಗಳಾಚರಣೆ

ವಂಧನೆಗಳು ಶ್ರೀ ಗುರುಗಳ ಶ್ರೀ ಯುತ ಪದ ಕಮಲಗಳಿಗೆ, ಶ್ರೀ ಗುರು ವರ್ಗಕ್ಕೆ, ಎಲ್ಲ ವೈಷ್ಣವರಿಗೆ
ಶ್ರೀ ರೂಪ ಗೊಸ್ವಾಮಿಗಳಿಗೆ, ಅವರ ಅಗ್ರಜರಿಗೆ, ಅವರ ಸಹ ಗಣರಾದ ರಘುನಾಥ ಗೊಸ್ವಮಿಗಳಿಗೆ, ಜೀವ ಗೋಸ್ವಾಮಿ ಹಾಗು ಅವರ ಸಹಚರರಿಗೆ,
ಅದ್ವೈತ ಪ್ರಭುಗಳಿಗೆ, ನಿತ್ಯಾನಂದ ಪ್ರಭುಗಳಿಗೆ, ಶ್ರೀ ಕೃಷ್ಣ ಚೈತನ್ಯ ಹಾಗು ಅವರ ಸಹಚರರಿಗೆ,
ಶ್ರೀ ರಾಧಾ-ಕೃಷ್ಣರ ಪದ ಕಮಲಗಳಿಗೆ, ಹಾಗು ಅವರ ಸಹ ಗಣರಾದ, ಶ್ರೀ ಲಲಿತ ಹಾಗು ಶ್ರೀ ವಿಶಾಕರವರಿಗೆ ಹಾಗು ಎಲ್ಲ ಸಖಿಯರಿಗೆ.