"ಕೃಷ್ಣ ದೇವ ಭವಂತಂ ವಂದೇ" - ಭಜನಾ ತಾತ್ಪರ್ಯ
೧ ಕೃಷ್ಣ ದೇವ ಭವಂತಂ ವಂದೇ
ಮನ ಮಾನಸ ಮಧುಕರಮರ್ಪಯ ನಿಜ-ಪದ ಪಂಕಜಾ ಮಕರಂದೆ
ಓ ಭಗವಾನ್ ಶ್ರೀ ಕೃಷ್ಣನೆ ! ನಾನು ನಿನಗೆ ವಂದಿಸುತಿದ್ದೇನೆ. ದಯೆಮಾಡಿ ನನ್ನ ಈ ಧುಂಬಿಎಂಬ ಮನಕ್ಕೆ, ನಿನ್ನ ಪಾದಕಮಲಗಳ ಜೇನನ್ನುಸವಿಯುವ ಸೇವೆಯನ್ನೀಯು. ಬೇರೆ ಪದಗಳ್ಲಲಿ ಹೇಳುವುದಾದರೆ, ದಯೆಮಾಡಿ ನನ್ನ ನಾಲಿಗೆಯ ರುಚಿಯನ್ನು ನಿನ್ನ ಪದಕಮಲಗಳ ಜೇನಿನ ರಸದ ಆಸ್ವಾದನೆಯನ್ನು ಕೊಟ್ಟು, ಬೇರಿನ್ನೇನು ರುಚಿಸದಂತೆ ಮಾಡು.
೨. ಯಧ್ಯಪಿ ಸಮಾಧಿಶು ವಿಧಿರಪಿ ಪಶ್ಯತಿ, ನಾ ತವ ನಖ್ಹಾಗ್ರ-ಮರೀಚಿಮ್
ಇದಂ ಇಚ್ಚಾಮಿ ನಿಷಮ್ಯತವಾಚ್ಯುತ ! ತದಪಿ ಕೃಪಾದ್ಭುತ-ವಿಚಿಂ
ಆದರೂ ಬ್ರಹ್ಮದೇವರು ಪೂರ್ಣ ಸಮಾಧಿಯಲ್ಲಿದ್ದರೂ, ವಿಧಿಯ ಪೂರ್ಣ ಜ್ಞಾನವಿದ್ದರೂ, ನಿನ್ನ ಕಾಲುಗುರುಗಳ ಒಂದು ಬಿಂಭವನ್ನಾದರೂ ನೋಡಲಾರರು. ಆದರೂ ಹೇ ಅಚ್ಯುತ, ನಿನ್ನ ಕೃಪೆಯ ಅಧ್ಭುತ ಮಹಿಮೆಯನ್ನು ತಿಳಿದು, ನಿನ್ನ ದರ್ಶನದ ಇಚ್ಚೆಯನ್ನ ಹೊಂದಿದ್ದೇನೆ, ದಯಪಾಲಿಸು.
೩. ಭಕ್ತಿರ್ ಉದಾಂಚ್ಯತಿ ಯದ್ಯಪಿ ಮಾಧವ, ನಾ ತವ್ಯೈ ಮಮ ತಿಲ-ಮಾತ್ರಿ
ಪರಮೇಶ್ವರ-ರತಾ ತದಪಿ ತವಾಧಿಕ, ದುರ್ಘಟ-ಘಟನ ವಿಧಾತ್ರಿ
ಹೇ ಮಾಧವ! ನನಗೆ ನಿನ್ನಲ್ಲಿ ಎಳ್ಳುಮಾತ್ರದಷ್ಟೂ ಭಕ್ತಿಯಿರದಿದ್ದರೂ, ನೀನು ನಿನ್ನ ಅಚಿಂತ್ಯ ಶಕ್ತಿಯಿಂದ, ಆಗದಿರುವ ಕಷ್ಠಸಾಧ್ಯ ಕಾರ್ಯಗಳನ್ನೂ ಸಾಧ್ಯಮಾಡುವೆ, ದಯೆಮಾಡಿ ನನ್ನ ಹೃದಯಾಳದ ಭಕ್ತ್ಯಾಕಾಂಕ್ಷೆಗಳನ್ನು ಪೂರ್ಣಮಾಡು.
೪. ಅಯಂ ಅವಿಲೋಲ ತಯಾದ್ಯ ಸನಾತನ, ಕಲಿತಾದ್ಭುತ-ರಸ ಭಾರಂ
ನಿವಸತು ನಿತ್ಯಂ ಇಹಾಮ್ರಿತ-ನಿಂದಿನಿ, ವಿಂದನ ಮಧುರಿಮ-ಸಾರಂ
ಹೇ ಸನಾತನ, ನಿನ್ನ ಪದಕಮಲಗಳಲ್ಲಿ ಅಸಂಖ್ಯಾತ ಅದ್ಭುತ ರಸಗಳು ತುಂಬಿವೆ , ನನ್ನ ಮನದ ದುಂಭಿಯು ನಿರಂತರವಾಗಿ ಆ ನಿನ್ನ ಜೇನಿನ ಅಮೃತದ ಸವಿಯಲಿ, ಬೇರೆಲ್ಲವನ್ನೂ ನಾಚಿಸುವಂತೆ ಮಾಡು, ಏಕೆಂದರೆ ಅದರಲ್ಲಿ ಸರ್ವರಸಗಳೂ ಅಡಗಿದೆ, ಇದುವೆ ನನ್ನ ಪ್ರಾರ್ಥನೆ
--------------------------------------------------------------------------------------------------------------------------